Light House Polyclinic, Light House Hill Road, MANGALORE - 575001

 

Press Release Dhrithi Foundation, Mangalore and Vidya Poshak, Dharwad

 

Vidya Poshak Dharwad extends support to meritorious students having financial constraints for pursuing higher education and so far more than 4000 students in 20 districts of Karnataka State have received assistance. In Dakshina Kannada District, Vidya Poshak, in association with Dhrithi Foundation, Mangalore has extended support to more than 200 needy students in the last two years. In the year 2006, 85 students were provided scholarships worth Rs 153000 and text books worth Rs. 8000. This year, support has been provided to 204 students (54 renewals) totaling Rs. 3,68,500 and books worth Rs. 9000. These students will be supported throughout their education until they are employed. For the year 2008-09, Dhrithi Foundation and Vidya Poshak, Dharwad invite early applications from deserving students so that they can be helped at the time of admission to college/professional courses. Students who are appearing for SSLC/PUC II examination in 2008, expecting to score more than 75% marks and having an annual family income of less than Rs. 36000 can apply. Students already pursuing professional courses who have obtained 65% marks in their qualifying examination or a CET rank of less than 12000, with an annual income of Rs. 60000 can also apply. The application forms can be obtained from Dhrithi Foundation, Light house Hill Road, Mangalore – 575 001 by sending a self addressed envelope with a Rs. 5 stamp or can be downloaded free from Dhrithi Foundation website. For further details, students can contact by phone at 0824-2422972 or email at dhrithifoundation@gmail.com The last date for submitting duly filled applications is February 20, 2008 Mangalore January 23, 2008

 

ಪತ್ರಿಕಾ ಪ್ರಕಟಣೆ

ಧೃತಿ ಫೌಂಡೇಶನ್, ಮಂಗಳೂರು ಮತ್ತು ವಿದ್ಯಾಪೋಷಕ್, ಧಾರವಾಡ

ಧಾರವಾಡದ ವಿದ್ಯಾ ಪೋಷಕ್ ಸಂಸ್ಥೆಯು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನೆರವನ್ನು ಒದಗಿಸುತ್ತಿದ್ದು, ಈಗಾಗಲೇ ಕರ್ನಾಟಕದ ೨೦ ಜಿಲ್ಲೆಗಳಲ್ಲಿ ೪೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾ ಪೋಷಕ್ ಸಂಸ್ಥೆಯು ಮಂಗಳೂರಿನ ಧೃತಿ ಫೌಂಡೇಶನ್ ಸಹಭಾಗಿತ್ವದಲ್ಲಿ ೨೦೦೬ನೇ ವರ್ಷದಲ್ಲಿ ೮೫ ಅರ್ಹ ವಿದ್ಯಾರ್ಥಿಗಳಿಗೆ ರೂ. ೧,೫೩,೦೦೦ ಮೊತ್ತದ ಆರ್ಥಿಕ ಸಹಾಯವನ್ನೂ, ರೂ. ೮೦೦೦ ಮೌಲ್ಯದ ಪುಸ್ತಕಗಳನ್ನೂ ಒದಗಿಸಿದ್ದು, ೨೦೦೭ರಲ್ಲಿ ೨೦೪ ವಿದ್ಯಾರ್ಥಿಗಳಿಗೆ ರೂ. ೩,೬೮,೫೦೦ರಷ್ಟು ಆರ್ಥಿಕ ನೆರವನ್ನೂ, ರೂ. ೮೦೦೦ ಮೌಲ್ಯದ ಪುಸ್ತಕಗಳನ್ನೂ ಒದಗಿಸಲಾಗಿದೆ. ಈ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗಸ್ಥರಾಗುವವರೆಗೂ ಈ ನೆರವು ಮುಂದುವರಿಯಲಿದೆ.

ಪ್ರಸಕ್ತ ೨೦೦೮ನೇ ವರ್ಷದಲ್ಲಿ ವಿದ್ಯಾ ಪೋಷಕ್ ಮತ್ತು ಧೃತಿ ಫೌಂಡೇಶನ್ ಸಂಸ್ಥೆಗಳು ಅರ್ಹ ವಿದ್ಯಾರ್ಥಿಗಳಿಂದ ಮುಂಚಿತವಾಗಿಯೇ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ವಿದ್ಯಾರ್ಥಿಗಳು ಕಾಲೇಜು ಯಾ ವೃತ್ತಿಪರ ವ್ಯಾಸಂಗಕ್ಕೆ ಸೇರುವ ವೇಳೆಯಲ್ಲಿಯೇ ಅವರಿಗೆ ನೆರವನ್ನು ಒದಗಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ೨೦೦೮ನೇ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಅಥವಾ ಎರಡನೇ ವರ್ಷದ ಪಿ.ಯು.ಸಿ. ಪರೀಕ್ಷೆಯನ್ನು ಬರೆಯುತ್ತಿರುವ, ಶೇ. ೭೫ಕ್ಕೆ ಮೇಲ್ಪಟ್ಟು ಅಂಕಗಳನ್ನು ಪಡೆಯುವ ಸಾಧ್ಯತೆಯಿರುವ ಮತ್ತು ಒಟ್ಟು ವಾರ್ಷಿಕ ಕೌಟುಂಬಿಕ ಆದಾಯವು ರೂ. ೩೬೦೦೦ವನ್ನು ಮೀರದಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿ, ಈಗಾಗಲೇ ವೃತ್ತಿಪರ ವ್ಯಾಸಂಗವನ್ನು ಮಾಡುತ್ತಿರುವ ವಿದ್ಯಾರ್ಥಿಗಳು, ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಶೇ. ೬೫ರಷ್ಟು ಅಂಕಗಳನ್ನು ಅಥವಾ ಪ್ರವೇಶ ಪರೀಕ್ಷೆಯಲ್ಲಿ ೧೨೦೦೦ಕ್ಕಿಂತ ಒಳಗಿನ ಶ್ರೇಣಿಯನ್ನು ಪಡೆದಿದ್ದು ವಾರ್ಷಿಕ ಕೌಟುಂಬಿಕ ಆದಾಯವು ರೂ. ೬೦೦೦೦ಕ್ಕಿಂತ ಕಡಿಮೆಯಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ಪಡೆಯಲು ರೂ. ೫ರ ಅಂಚೆಚೀಟಿ ಹಚ್ಚಿದ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಧೃತಿ ಫೌಂಡೇಶನ್, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು - ೫೭೫೦೦೧ ಇಲ್ಲಿಗೆ ಬರೆಯಬಹುದು ಅಥವಾ ಧೃತಿ ಫೌಂಡೇಶನ್ ಅಂತರ್ಜಾಲ ತಾಣದಿಂದ ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ದೂರವಾಣಿ ೦೮೨೪-೨೪೨೨೯೭೨ನ್ನು ಸಂಪರ್ಕಿಸಬಹುದು ಅಥವಾ dhrithifoundation@gmail.com ವಿಳಾಸಕ್ಕೆ ಇ-ಪತ್ರವನ್ನು ಕಳುಹಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ ೨೦, ೨೦೦೮ ಕೊನೆಯ ದಿನವಾಗಿರುತ್ತದೆ.

ಮಂಗಳೂರು,
ಜನವರಿ ೨೩, ೨೦೦೮
 

 
 

Dhrithi Foundation
Jan 24, 2008